ಶನಿವಾರ, ಡಿಸೆಂಬರ್ 15, 2012

ಕನ್ನಡ ಭಾಷಾ ಕಮ್ಮಟ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗಗಳು ಸಂಯುಕ್ತವಾಗಿ ಆಯೋಜಿಸಿದ್ದ ಒಂದು ದಿನದ ಕನ್ನಡ ಭಾಷಾ ಕಮ್ಮಟವು 15-12-2012 ರಂದು ಕಾಲೇಜಿನಲ್ಲಿ ನಡೆಯಿತು. ಡಾ.ಮಹಾಬಲೇಶ್ವರ ರಾವ್ ಉದ್ಘಾಟಿಸಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಜುಂಜಣ್ಣ   ಉಪಸ್ಥಿತರಿದ್ದು, ಸರ್ವರನ್ನೂ ಸ್ವಾಗತಿಸಿದರು. ಮುಂದೆ ನಡೆದ ಸಂವಾದದಲ್ಲಿ ಉಪ್ಪಂಗಳ ರಾಮ ಭಟ್, ಡಾ.ಪಾಂಡುರಂಗ, ಡಾ.ಗಣನಾಥ  ಎಕ್ಕಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಂಜುನಾಥ ಕರಬ, ಚಂದ್ರ ಜಪ್ತಿ, ಕಾತ್ಯಾಯನಿ ಕುಂಜಿಬೆಟ್ಟು, ಡಾ.ಪುತ್ತಿ ವಸಂತಕುಮಾರ್,ಅಂಶುಮಾಲಿ ಸಂವಾದದಲ್ಲಿ ಪಾಲ್ಗೊಂಡರು. ಭಾಗವಸಿದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಪ್ರಶ್ನಾರೂಪದಲ್ಲಿ ಕೇಳಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ವಂದಿಸಿ, ಪ್ರಜ್ಞ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ