ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಸ್ನಾತಕೋತ್ತರ (ಎಂಕಾಂ ಮತ್ತು ಎಂಎಸ್ಸಿ) ಕೇಂದ್ರವನ್ನು ಆ. 3ರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸುವರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌ| ಕಾರ್ಯದರ್ಶಿ ಪ್ರದೀಪ್ ಕುಮಾರ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅದಮಾರು ಮಠ ಶಿಕ್ಷಣ ಮಂಡಳಿ ಸಂಸ್ಥಾಪಕ ಶ್ರೀ ವಿಭುದೇಶತೀರ್ಥ ಶ್ರೀಪಾದರ ಆಶಯದಂತೆ ಪೂರ್ಣಪ್ರಜ್ಞ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಗುರುಗಳ ಮಾರ್ಗದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದರು.
ಉದ್ಘಾಟನೆಯ ಬಳಿಕ ಪೂರ್ಣಪ್ರಜ್ಞ ಆಡಿಟೋ ರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣನ ವಿಗ್ರಹವನ್ನು ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಅನಾವರಣ ಮಾಡಲಿದ್ದಾರೆ. ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು. ಸಚಿವ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್, ಮಂಗಳೂರು ವಿ.ವಿ. ಕುಲಪತಿ ಪ್ರೊ| ಭೈರಪ್ಪ, ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಆರ್. ಪ್ರಭಾಕರ್ ಮುಖ್ಯ ಅತಿಥಿಗಳಾಗಿರುವರು ಎಂದರು.
ಹೊಸ ಕಟ್ಟಡದಲ್ಲಿ ತರಗತಿ: ಸ್ನಾತಕೋತ್ತರ ಕೇಂದ್ರಕ್ಕಾಗಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿಯೇ ಸುಮಾರು 80 ಲ.ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಂಕಾಂ ಹಗಲು ಮತ್ತು ಸಂಜೆ, ಎಂಎಸ್ಸಿ (ಗಣಿತಶಾಸ್ತ್ರ) ಹಗಲಿನಲ್ಲಿ ಮಾತ್ರ ತರಗತಿಗಳು ನಡೆಯಲಿವೆ ಎಂದು ಪ್ರದೀಪ್ ಕುಮಾರ್ ತಿಳಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಗೌ| ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲರಾದ ಡಾ| ಬಿ. ಜಗದೀಶ ಶೆಟ್ಟಿ ಮತ್ತು ಡಾ| ಟಿ.ಎಸ್. ರಮೇಶ್, ಪಿಐಎಂನ ನಿರ್ದೇಶಕ ಡಾ| ಎಂ.ಆರ್. ಹೆಗಡೆ, ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಕಾಂತ್ ರಾವ್ ಸಿದ್ಧಾಪುರ, ಆಡಳಿತಾಧಿಕಾರಿ ಬಿ. ಕಿಶೋರ್ ರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.
Read more at http://www.udayavani.com/kannada/news/%E0%B2%89%E0%B2%A1%E0%B3%81%E0%B2%AA%E0%B2%BF-%E0%B2%89%E0%B2%A1%E0%B3%81%E0%B2%AA%E0%B2%BF/87296/%E0%B2%86-3-%E0%B2%AA%E0%B3%82%E0%B2%B0%E0%B3%8D%E0%B2%A3%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E-%E0%B2%AA%E0%B2%BF%E0%B2%9C%E0%B2%BF-%E0%B2%B8%E0%B3%86%E0%B2%82%E0%B2%9F%E0%B2%B0%E0%B3%8D%E2%80%8C-%E0%B2%89%E0%B2%A6%E0%B3%8D%E0%B2%98%E0%B2%BE%E0%B2%9F%E0%B2%A8%E0%B3%86#2ZEDvBl2uptCxEf2.99
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ