ಆರ್ಯಭಟ, ಪೂರ್ಣಪ್ರಜ್ಞ ಕಾಲೇಜು, ಉಡುಪಿ _ POORNAPRAJNA COLLEGE , UDUPI -This blog publishes Popular Science, Research , Arts, Humanities,Commerce, Management,& career Guidance articles in Kannada & English
ಶುಕ್ರವಾರ, ಡಿಸೆಂಬರ್ 30, 2011
ಗುರುವಾರ, ಡಿಸೆಂಬರ್ 29, 2011
‘Entire Western Ghats ecologically sensitive'
ಬುಧವಾರ, ಡಿಸೆಂಬರ್ 28, 2011
ಮುಂಚೂಣಿಯ ಬಯೊಟೆಕ್, ಈಗಾಗಿದೆ ಭಯ-ಟೆಕ್ --ನಾಗೇಶ್ ಹೆಗಡೆ
ಮುಂಚೂಣಿಯ ಬಯೊಟೆಕ್, ಈಗಾಗಿದೆ ಭಯ-ಟೆಕ್ -Prajavani-Dangers of Bio- Tech- Nagesh Hegade
Manmohan's concern over decline in quality of maths teachers
Bio Technology Regulatory Authority of India- Bill
ಸೋಮವಾರ, ಡಿಸೆಂಬರ್ 26, 2011
Mangalore Univesity-BBM-2011-Four Ranks to Poornaprajna College, Udupi
BBM-Suvina. V[ 5 ],Abhiram { 6 },Anusha Vittal-[ 8 ] Suraj Bhat- [ 10 ]
ಶುಕ್ರವಾರ, ಡಿಸೆಂಬರ್ 23, 2011
ಗುರುವಾರ, ಡಿಸೆಂಬರ್ 22, 2011
ಬುಧವಾರ, ಡಿಸೆಂಬರ್ 21, 2011
ಮಂಗಳವಾರ, ಡಿಸೆಂಬರ್ 20, 2011
ಮರಗಳನ್ನು ಬುಡ ಸಹಿತ ಕಿತ್ತು ಬೇರೆಡೆ ನೆಡುವ ವ್ಯ ವಸ್ಥೆ ಆಗಬೇಕು: ಡಾ.ಎ.ಪಿ.ಭಟ್
ಮಂಗಳವಾರ, ಡಿಸೆಂಬರ್ 13, 2011
ಸೋಮವಾರ, ಡಿಸೆಂಬರ್ 12, 2011
ಭಾನುವಾರ, ಡಿಸೆಂಬರ್ 11, 2011
ಶನಿವಾರ, ಡಿಸೆಂಬರ್ 10, 2011
ಮತ್ತೆ ಮತ್ತೆ ಕಾಡುವ ಪಂಪನ ಸಾಲುಗಳು
Udayavani: Kannada-Pampa- nIlanjaneya natya-Dr. Shrikanth Siddapura
ಶುಕ್ರವಾರ, ಡಿಸೆಂಬರ್ 9, 2011
ಗುರುವಾರ, ಡಿಸೆಂಬರ್ 8, 2011
'Palms Of Karnataka' { Dr. K. G. Bhat } Book Release at PPC Udupi-10-12-2012
ಮಂಗಳವಾರ, ಡಿಸೆಂಬರ್ 6, 2011
ಭಾನುವಾರ, ಡಿಸೆಂಬರ್ 4, 2011
ಗುರುವಾರ, ಡಿಸೆಂಬರ್ 1, 2011
ಮಂಗಳವಾರ, ನವೆಂಬರ್ 29, 2011
ಭಾನುವಾರ, ನವೆಂಬರ್ 27, 2011
ಬುಧವಾರ, ನವೆಂಬರ್ 23, 2011
ಮಂಗಳವಾರ, ನವೆಂಬರ್ 22, 2011
ಸೋಮವಾರ, ನವೆಂಬರ್ 21, 2011
ಭಾನುವಾರ, ನವೆಂಬರ್ 20, 2011
ಶನಿವಾರ, ನವೆಂಬರ್ 19, 2011
ಪು ತಿ ನ ರವರ ಒಂದು ಕವನ
ಸಮಕಾಲೀನ ಸಂದರ್ಭದಲ್ಲಿ ಪು.ತಿ.ನ. ರವರ ನಿಲ್ಲಿಸದಿರು ವನಮಾಲಿ ಕವನ
ಭಕ್ತ ಕವಿ ಪು. ತಿ. ನರಸಿಂಹಾಚಾರ್ರವರ ನಿಲ್ಲಿಸದಿರು ವನಮಾಲಿ ಕೊಳಲಗಾನವ ಅವರ ಪ್ರಸಿದ್ಧ ಕವನಗಳಲ್ಲಿ ಒಂದು. ಮಥುರಾ ನಗರದಲ್ಲಿ ಬಿಲ್ಲಹಬ್ಬ. ಕೃಷ್ಣ ಮತ್ತು ಬಲರಾಮರನ್ನು ಕಂಸನು ಹಬ್ಬಕ್ಕೆ ಆಹ್ವಾನಿಸುತ್ತಾನೆ. ಅಕ್ರೂರನು ಕಂಸನ ಈ ಆಹ್ವಾನವನ್ನು ಹೊತ್ತು ಗೋಕುಲಕ್ಕೆ ಬರುತ್ತಾನೆ. ಕೃಷ್ಣನು ಗೋಕುಲದಿಂದ ನಿರ್ಗಮಿಸಲು ಸಿದ್ಧತೆ ನಡೆಸುತ್ತಾನೆ. ಕೃಷ್ಣನ ಕೊಳಲ ಗಾನದ ಅಗಲುವಿಕೆ ಗೋಪಿಕಾ ಸ್ತ್ರೀಯರಲ್ಲಿ ಅತೀವ ವೇದನೆ ತರುತ್ತದೆ. ಅದನ್ನೇ ಮೆಲುಕು ಹಾಕುತ್ತಾ ಸಾಗುವ ಈ ಕವನದಲ್ಲಿ ಗೋಪಿಕಾ ಸ್ತ್ರೀಯರ ಮತ್ತು ಕೃಷ್ಣನ ನಡುವಿರುವ ಬಾಂಧವ್ಯವು ಭಾವಪೂರ್ಣವಾಗಿ ಮೂಡಿಬಂದಿದೆ.
ಈ ಕವನವು ಗೋಕುಲ ನಿರ್ಗಮನಕ್ಕೆ ಸಂಬಂಧಿಸಿಸಿದುದಾದರೂ, ಕಾವ್ಯದ ಉದ್ದಕ್ಕೂ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಮತ್ತು ಅದಕ್ಕೆ ಪರಿಹಾರಗಳನ್ನು ಕಾಣಬಹುದು.ನಿಜವಾದ ಕಾವ್ಯ ಸಾರ್ವಕಾಲಿಕ ಸತ್ಯವನ್ನು ಒಳಗೊಂಡಿರಬೇಕು ಎಂಬುದು ವಿಮರ್ಶಕರ ನಿಲುವು. ಅಂತಹ ಕಾವ್ಯ ಉತ್ತಮ ಕಾವ್ಯಗಳ ಸಾಲಿಗೆ ನಿಲ್ಲುತ್ತದೆ. ಈ ದೃಷ್ಟಿಯಿಂದ ಈ ಕವನವು ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ. ಕವಿಗೆ ಅರಿವಿದ್ದೋ ಅಥವಾ ಇಲ್ಲದೆಯೋ ಈ ಸಮಕಾಲೀನ ಸಂಗತಿಗಳು ಕವನದಲ್ಲಿ ತೆರೆದುಕೊಳ್ಳುತ್ತಿರುವುದು ಕವನದ ಘನತೆಯನ್ನು ಹೆಚ್ಚಿಸಿದೆ.
ಸಮಕಾಲೀನ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕವನವನ್ನು ಅಥರ್ೈಸ ಹೊರಟಾಗ ಕಾವ್ಯದಲ್ಲಿ ಅನೇಕ ಅಂಶಗಳು ನಮಗೆ ಆಪ್ಯಾಯಮಾನವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು ಕಾವ್ಯದಲ್ಲಿ ಚಿತ್ರಿಸಲ್ಪಟ್ಟ ದೇಶೀಯ ಅಂಶ, ಆಧುನಿಕ ಪ್ರಪಂಚದ ಒತ್ತಡಗಳ ನಡುವೆ ಸಂಗೀತದಂತಹ ಕಲಾಪ್ರಕಾರಗಳ ಮಹತ್ವ್ತ,ಜೀವನ ಮಟ್ಟದ ಸುಧಾರಣೆಯ ಸಂಬಂಧ ಗೋಪಿಕಾ ಸ್ತ್ರೀಯರ ಮೂಲಕ ಕವಿ ಕೊಡುವ ಸಂದೇಶ.
ಇಂದು ದೇಸೀಯ ಸಂಸ್ಕೃತಿಗೆ ಧಕ್ಕೆ ಒದಗುತ್ತಿರುವ ಬಗ್ಗೆ ಆಕ್ಷೇಪ ಸಾಮಾನ್ಯವಾದುದು. ವಿದೇಶಿ ಸಂಸ್ಕೃತಿಗಳ ಪ್ರಭಾವ ಗ್ರಾಮೀಣ ಸಂಸ್ಕೃತಿಯ ಬುಡಕ್ಕೆ ಅಪಾಯ ತರುತ್ತಿವೆ. ಗ್ರಾಮೀಣ ಬದುಕಿನಿಂದ ವಿಮುಖರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮಗಳು ಬರಿದಾಗುತ್ತಿದ್ದು, ನಗರ ಜೀವನವು ನಿತ್ಯದ ಮಾತಾಗಿದೆ. ಈ ಕವನವು ದೇಸೀಯ ಸಂಸ್ಕೃತಿಯತ್ತ ಒಲವು ತೋರಿಸುವಂತಿದೆ. ಇಲ್ಲಿನ ಕೃಷ್ಣನು ಗ್ರಾಮೀಣ ಭಾಗದ ಮುಗ್ಧ ಜನರ ಪ್ರತಿನಿಧಿ. ಅವರ ಬದುಕಿನ ಕತ್ತಲೆಯನ್ನು ಓಡಿಸಿ, ಬೆಳಕಿನ ಕಿರಣಗಳನ್ನು ಬೀರುವವನು. ಕವನದ ಕೃಷ್ಣನ ಉಡುಗೆ ತೊಡುಗೆಗಳೂ ಗ್ರಾಮೀಣ ಪರಿಸರವನ್ನೇ ನೆನಪಿಸುವಂತಿದೆ. ಆತನು ಧರಿಸಿರುವುದು ವನಮಾಲೆಯನ್ನು. ಆತನ ಕೈಯಲ್ಲಿರುವುದು ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಬಿದಿರಿನಿಂದ ಮಾಡಲ್ಪಟ್ಟ ಕೊಳಲು. ಆತನ ಸುತ್ತ ಇರುವ ಗೋಪಿಕಾ ಸ್ತ್ರೀಯರೂ ಗ್ರಾಮೀಣ ಹಿನ್ನೆಲೆಯವರು. ಹಳ್ಳಿಯ ಸಾಮಾನ್ಯ ಸ್ತ್ರೀಯರಂತೆ ಮುಗ್ಧರು. ಈ ಮುಗ್ಧ ಮಂದಿಗೆ ಕೃಷ್ಣನ ಮೇಲೆ ಅತೀವ ಭಕ್ತಿ. ಅವರ ಗೌರವಕ್ಕೆ ಪಾತ್ರನಾದವನು ಕೃಷ್ಣ. ಇದಕ್ಕೆ ಪ್ರಮುಖ ಕಾರಣ ಶ್ರೀ ಕೃಷ್ಣನು ಅವರ ಮೇಲೆ ಹರಿಸಿದ ನಿಷ್ಕಲ್ಮಶ ಮತ್ತು ನಿ:ಸ್ವಾರ್ಥ ಪ್ರೀತಿ. ಈ ಪ್ರೀತಿ ಕೇವಲ ಬಾಯಿ ಮಾತಿಗೆ ಸೀಮಿತವಲ್ಲ. ಒಣ ಪ್ರತಿಷ್ಠೆದಿಂದ ಕೂಡಿದುದಲ್ಲ. ಯಾವುದೇ ನಾಟಕೀಯತೆ ಇಲ್ಲಿ ಇಲ್ಲ. ಅದರ ಹಿಂದೆ ಮುಗ್ಧ ಮಂದಿಯ ಬದುಕನ್ನು ಎತ್ತರಕ್ಕೊಯ್ಯುವ ಹಂಬಲ ಇದೆ. ಹಾಗಾಗಿ ಈ ತರನಾದ ಪ್ರೀತಿಯು ಅವರ ಜೀವನಕ್ಕೆ ಹೊಸ ಅರ್ಥವನ್ನು ತಂದಿದೆ. ಕವನದಲ್ಲಿ ಗೋಪಿಕಾ ಸ್ತ್ರೀಯರು ಹೇಳುವ ನಮ್ಮ ಬಾಳಿನಾಳದಿಂದ ಮತ್ಸ್ಯನಂತೆ ಮೇಲೆ ತಂದ, ಕೃಷ್ಣ, ಈ ಚಿದಾನಂದ ಮರಳಿ ಮುಳುಗಿ ಹೋಹುದಯ್ಯಾ ಸಾಲುಗಳೇ ಇದಕ್ಕೆ ಸಾಕ್ಷಿ.
ಕವನದಲ್ಲಿ ವ್ಯಕ್ತವಾದ ಗ್ರಾಮೀಣ ಬದುಕಿನ ಈ ಮುಗ್ಧ ಸ್ತ್ರೀಯರ ಜೀವನ ಮಟ್ಟದ ಸುಧಾರಣೆಯ ಸಂಗತಿ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗಿದೆ. ಇಂದು ಹಣಕ್ಕೆ ವ್ಯಾಪಕ ಮಹತ್ವ ಲಭಿಸುತ್ತಿದೆ. ಹಣವೇ ಯೋಗ್ಯತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗುತ್ತಿದೆ. ಹಣ ಸಂಪಾದನೆಯ ಹುಚ್ಚಿನ ಮುಂದೆ ನಮ್ಮ ಹಿರಿಯರು ಬೆಳೆಸಿದ ಅನೇಕ ಮೌಲಿಕ ವಿಚಾರಗಳು ಮೂಲೆಗುಂಪಾಗುತ್ತಿವೆ. ಹಣದ ಹಿಂದೆ ಬಿದ್ದ ಮನುಷ್ಯರಿಗೆ ಮಾನಸಿಕ ನೆಮ್ಮದಿಯು ಮರೀಚಿಕೆಯಾಗುತ್ತಿದೆ. ಬದುಕಿನ ಸಂಬಂಧಗಳೂ ಶಿಥಿಲವಾಗುತ್ತಿವೆ. ಆದರೆ ಈ ಕವನವು ಜೀವನ ಮಟ್ಟದ ಸುಧಾರಣೆಯ ಮಾನದಂಡದ ಬಗ್ಗೆ ತಿಳಿಸುತ್ತಾ,ಸಮಕಾಲೀನ ಸಮಾಜದ ಈ ತಪ್ಪು ತಿಳುವಳಿಕೆಗಳನ್ನು ತೊಡೆದು ಹಾಕಲು ಶ್ರಮಿಸುವಂತಿದೆ. ಗೋಪಿಕಾ ಸ್ತ್ರೀಯರ ಮೂಲಕ ಬದುಕನ್ನು ಬೆಳಗಿಸುವ ಹೊಸ ಸೂತ್ರವೊಂದನ್ನು ಕವಿಯು ಇಲ್ಲಿ ನೀಡುತ್ತಿರುವುದು ಗಮನಾರ್ಹ. ಕವಿಯ ಪ್ರಕಾರ ಮಾನಸಿಕವಾದ ಚಿಂತೆಗಳಿಂದ ಮುಕ್ತರಾಗುವುದೇ ಬದುಕಿನ ಮಹತ್ತರ ಸಾಧನೆ. ನಿತ್ಯ ನೆಮ್ಮದಿಯ ಬದುಕೇ ಯಶಸ್ಸಿನ ದ್ಯೋತಕ. ಕವನದಲ್ಲಿ ಈ ಅರ್ಥವನ್ನು ಸ್ಫುರಿಸುವ ಸಾಲುಗಳಿಲ್ಲಿ ಗಮನಾರ್ಹ. ನೀರು ನಿಂತು ಕೊಳೆಯುವಂತೆ ನೂರು ಚಿಂತೆಗಳು ಮನಸ್ಸಿನಲ್ಲಿ ನೆಲೆನಿಂತು ಗೋಪಿಕಾ ಸ್ತ್ರೀಯರನ್ನು ಕಾಡುತ್ತಿದ್ದವು. ಕೃಷ್ಣನ ಕೊಳಲ ಧ್ವನಿಯ ನೆರೆಯು ನುಗ್ಗಿ ಈ ಚಿಂತೆಗಳಿಂದ ಅವರನ್ನು ಬಿಡುಗಡೆಗೊಳಿಸಿತಂತೆ. ಗೋಪಿಕಾ ಸ್ತ್ರೀಯರ ಬದುಕಿಗೆ ಬೆಳಕಾಗಿ ಬಂದವನು ಶ್ರೀ ಕೃಷ್ಣ. ಅದರಲ್ಲೂ ಆತನ ಕೊಳಲಗಾನ. ಕೃಷ್ಣನ ಪ್ರಭಾವದ ಮೊದಲು ಸದಾ ದು:ಖ, ಕಷ್ಟಗಳ ಕೋಟಲೆಗಳ ನಡುವೆ ಅವರ ಬದುಕು ಸಾಗುತ್ತಿತ್ತು. ಆದರೆ ಕೃಷ್ಣನ ಕೊಳಲಗಾನ ಅವರ ಬದುಕಿನ ಶೈಲಿಯನ್ನೇ ಬದಲಿಸಿತು. ಆದರೆ ಈ ಬದಲಾವಣೆ ಆರ್ಥಿಕವಾದ ದೃಷ್ಟಿಯಿಂದ ಗಣನೀಯವಾಗಿ ಆಗದೇ ಇರಬಹುದು. ಆದರೆ ಮಾನಸಿಕ ಸ್ತರದಲ್ಲಿ ಅವರ ಬದುಕು ಶ್ರೀಮಂತವಾಯಿತು. ಅತಿಯಾದ ಅಹಂಕಾರ, ವೈಭವದ ಅಪೇಕ್ಷೆ ಮೊದಲಾದ ಗುಣಗಳು ಕರಗಿ ಆನಂದ, ಸಂತೃಪ್ತಿಗಳು ಅವರ ಜೀವನದಲ್ಲಿ ನಿತ್ಯ ಸಂಗಾತಿಗಳಾದವು. ಈ ಸುಧಾರಣೆಗೆ ಮುಖ್ಯ ಕಾರಣ ಶ್ರೀ ಕೃಷ್ಣನ ಸಂಸರ್ಗ ಮತ್ತು ಆತನ ಕೊಳಲನಾದದಲ್ಲಿ ಅವರು ಬೆಳೆಸಿಕೊಂಡ ಆಸಕ್ತಿ.
ಇಂದು ಆರ್ಥಿಕವಾಗಿ ನಾವು ಶ್ರೀಮಂತರಿರಬಹುದು. ಆದರೆ ಮಾನಸಿಕವಾಗಿ ನಮ್ಮಲ್ಲಿ ಹೆಚ್ಚಿನವರು ಕಡುಬಡವರು. ಸಂತೋಷ, ತೃಪ್ತಿ, ಆನಂದ ಬದುಕಿನಿಂದ ಮಾಯವಾಗುತ್ತಿದೆ. ಹಾಗಾಗಿ ಮಾನಸಿಕ ಒತ್ತಡ, ಹತಾಶೆಗಳು ಇಂದು ಮನುಷ್ಯರನ್ನು ಕಾಡುತ್ತಿವೆ. ಈ ಒತ್ತಡಮುಕ್ತ ಬದುಕಿಗೆ ಸಂಗೀತ ಮತ್ತು ಅದರೊಂದಿಗೆ ಬದುಕಿನಲ್ಲಿ ಅರಳಿಸಿಕೊಳ್ಳಬೇಕಾದ ಸ್ನೇಹ ಮತ್ತು ಪ್ರೀತಿಗಳೇ ಮದ್ದುಗಳೆಂದು ಕವನವು ಮತ್ತೆ ಮತ್ತೆ ಸಾರುತ್ತಿದೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಹಿನ್ನೆಲೆಯಲ್ಲಿ ನಮ್ಮ ಬದುಕನ್ನು ಪುನ: ಕಟ್ಟುವ ಅವಶ್ಯಕತೆಗಳನ್ನು ಕವನವು ನೆನಪಿಸುತ್ತದೆ.
ಆಧ್ಯಾತ್ಮ, ಸಾಹಿತ್ಯ , ಕಲೆ, ಸಂಸ್ಕೃತಿ ಇತ್ಯಾದಿ ಅನೇಕ ಸಂಗತಿಗಳು ಹಣ ಸಂಪಾದನೆಯು ಗುರಿಯ ಮುಂದೆ ನಲುಗುತ್ತಿವೆ. ಇದು ನಮ್ಮ ಸಮಾಜದ ದುರಂತವೂ ಹೌದು.ಆದರೆ ಸಮಾಜವೊಂದರ ಮೌಲ್ಯವನ್ನು ಕೇವಲ ಆರ್ಥಿಕ ಬಲದಿಂದ ಅಳೆಯುವುದರ ವಿರುದ್ಧ ಕವನ ಧ್ವನಿ ಎತ್ತುತ್ತದೆ.ಬದಲಾವಣೆಯ ಬಿರುಗಾಳಿಯು ಭರದಿಂದ ಬೀಸುತ್ತಿರುವ ಇಂದಿನ ವಾತಾವರಣದಲ್ಲಿ ಈ ಕವನದ ಆಶಯವು ಒಮ್ಮೆ ನಮ್ಮನ್ನು ಯೋಚಿಸುವಂತೆ ಮಾಡೀತು.

ಡಾ.ಶ್ರೀಕಾಂತ್ ಸಿದ್ದಾಪುರ
ಶುಕ್ರವಾರ, ನವೆಂಬರ್ 18, 2011
ಗುರುವಾರ, ನವೆಂಬರ್ 17, 2011
ಭಾನುವಾರ, ನವೆಂಬರ್ 13, 2011
Chandigarh mourns death of Nobel laureate Hargobind Khorana
ಮಂಗಳವಾರ, ನವೆಂಬರ್ 8, 2011
Skywatch- November- : An event to look forward
ಭಾನುವಾರ, ನವೆಂಬರ್ 6, 2011
ಬುಧವಾರ, ನವೆಂಬರ್ 2, 2011
ಮಂಗಳವಾರ, ನವೆಂಬರ್ 1, 2011
ಸೋಮವಾರ, ಅಕ್ಟೋಬರ್ 31, 2011
ಭಾನುವಾರ, ಅಕ್ಟೋಬರ್ 23, 2011
ಶನಿವಾರ, ಅಕ್ಟೋಬರ್ 22, 2011
ಶುಕ್ರವಾರ, ಅಕ್ಟೋಬರ್ 21, 2011
ಗುರುವಾರ, ಅಕ್ಟೋಬರ್ 20, 2011
ಮಂಗಳವಾರ, ಅಕ್ಟೋಬರ್ 18, 2011
ಸೋಮವಾರ, ಅಕ್ಟೋಬರ್ 17, 2011
ಭಾನುವಾರ, ಅಕ್ಟೋಬರ್ 16, 2011
ಶುಕ್ರವಾರ, ಅಕ್ಟೋಬರ್ 14, 2011
Chikkamela
ಕುಂದಾಪ್ರ ಪರಿಸರದಲ್ಲಿ ಚಿಕ್ಕಮೇಳದ ಗೆಜ್ಜೆನಾದ
ಇದೀಗ ಮಳೆಗಾಲ. ಯಕ್ಷಗಾನ ಮೇಳಗಳು ನಿದ್ರೆ ಹೋಗಿವೆ. ಕಲಾವಿದರಿಗೂ ಸ್ವಲ್ಪ ವಿಶ್ರಾಂತಿ. ಈ ಸಮಯದಲ್ಲಿ ಯಕ್ಷಗಾನ ನೋಡಬೇಕೇ?. ನಗರ ಪ್ರದೇಶದ ಸಭಾಭವನಕ್ಕೆ ಹೋಗಬೇಕು. ಆದರೆ ಬಯಲಿನಲ್ಲಿ ಕುಳಿತು ನೋಡಿದಷ್ಟು ಖುಷಿಯನ್ನು ಇದು ನೀಡೀತೇ?. ಖಂಡಿತಾ ಇಲ್ಲ. ಮಳೆಗಾಲದಲ್ಲಿ ಮೇಳದ ತಿರುಗಾಟವಿಲ್ಲ್ಲ ಎಂದು ಪ್ರೇಕ್ಷಕರು ಕೊರಗುವ ಅಗತ್ಯವಿಲ್ಲ. ಮಳೆಗಾಲದಲ್ಲೂ ಮನೆಮನೆಯಲ್ಲೂ ಯಕ್ಷಗಾನ. ಹೀಗೊಂದು ಪ್ರಯತ್ನವು ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದೇ ಮನೆ ಮನೆ ಸುತ್ತುವ ಚಿಕ್ಕಮೇಳ
ಹೆಸರೇ ಹೇಳುತ್ತಿದೆ. ಇದು ಚೊಕ್ಕ ಮತ್ತು ಚಿಕ್ಕಮೇಳ. ಇಬ್ಬರು ವೇಷಧಾರಿಗಳು ಹೆಚ್ಚೆಂದರೆ ಇಬ್ಬರೇ. ಒಂದು ಪುರುಷ ವೇಷವಾದರೆ; ಇನ್ನೊಂದು ಸ್ತ್ರೀವೇಷ. ಜೊತೆಗೆ ಭಾಗವತರು ಬೇಕಲ್ಲವೇ?. ಅವರೊಂದಿಗೆ ಮದ್ದಲೆಯವರು ಮತ್ತು ಶ್ರುತಿಯವರು. ಅಬ್ಬಬ್ಬಾ ಎಂದರೆ ಒಂದೈದು ಮಂದಿ. ಚಿಕ್ಕಮೇಳ ಸಂಜೆ 6 ರಿಂದ ರಾತ್ರಿ 10:30 ರ ತನಕ ತಿರುಗಾಟ ನಡೆಸುತ್ತದೆ. ಒಂದೊಂದು ಮನೆಯಲ್ಲಿ ಸುಮಾರು 15-20 ನಿಮಿಷ ಪ್ರದರ್ಶನ. ಮನೆಯ ಮುಂಭಾಗದ ಚಾವಡಿಯೆ ರಂಗಸ್ಥಳ. ಗ್ರಾಮೀಣ ಭಾಗದ ಜನರಿಗೆ ಹೀಗೆ ಬರುವ ಮೇಳದ ಬಗ್ಗೆ ಗೌರವ ಮತ್ತು ಭಕ್ತಿ. ಅಕ್ಕಿ, ತೆಂಗಿನ ಕಾಯಿ. ಅಡಿಕೆ, ವೀಳ್ಯದೆಲೆ, ದೀಪ ಮೊದಲಾದವುಗಳನ್ನು ಸಿದ್ಧಪಡಿಸಿ ಕೊಂಡು ಕಾಯುತ್ತಿರುತ್ತಾರೆ. ಈ ಭಕ್ತಿಗೂ ಒಂದು ಕಾರಣವಿದೆ. ಚಿಕ್ಕಮೇಳದಲ್ಲಿಯೂ ದೇವತಾ ಆರಾಧನೆಯ ಕಲ್ಪನೆ ಇದೆ. ಇದೂ ಒಂದು ಸೇವೆ. ಗೆಜ್ಜೆಸೇವೆ ಎಂದೇ ಗೌರವ. ಈ ಸೇವೆಯನ್ನು ಮನೆ ಮುಂದೆ ನಡೆಸಿದಲ್ಲಿ ಅನಿಷ್ಠಗಳೆಲ್ಲಾ ನಾಶವಾಗುತ್ತವೆ ಎಂಬ ನಂಬಿಕೆ. ಚಿಕ್ಕಮೇಳಕ್ಕೆ ಸಂಭಾವನೆಯೂ ಅವರವರ ಇಷ್ಟಕ್ಕೆ ಬಿಟ್ಟ ವಿಚಾರ. ರೂ.50, 100, 200 ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ ನೀಡುತ್ತಾರೆ. ಪುರಾಣ ಪ್ರಸಂಗಗಳ ಸನ್ನಿವೇಶದ ಪ್ರದರ್ಶನಕ್ಕೆ ಇಲ್ಲಿನ ಆದ್ಯತೆ. ಎರಡು ಪಾತ್ರಕ್ಕೆ ತಕ್ಕುದಾದ ಕಥಾಭಾಗವನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಕ್ರಮ. ಸುಮಾರು 15 ನಿಮಿಷಗಳ ಪ್ರದರ್ಶನದ ತರುವಾಯ ಮನೆಮಂದಿಗೆ ಒಳಿತನ್ನೇ ಮಾಡುವಂತೆ ಪ್ರಾಥರ್ಿಸಿ ದೇವರ ಪ್ರಸಾದವನ್ನು ನೀಡಲಾಗುತ್ತದೆ. ಕೆಲವು ಮನೆಯವರು ಚಿಕ್ಕಮೇಳದ ಕಲಾವಿದರಿಗೆ ಎಲೆ ಅಡಿಕೆ ಮೆಲ್ಲಲು ನೀಡುವುದುಂಟು. ಕೆಲವು ಮನೆಯವರು ಚಾ, ತಿಂಡಿಗಳನ್ನೂ ನೀಡುತ್ತಾರೆ. ಆದರೆ ಹಾಗೆ ಕೊಡಲೇಬೇಕೆಂಬ ಆಗ್ರಹವಿಲ್ಲ.
ಈ ಕಲೆಗೆ ಪುನರ್ಜನ್ಮ ನೀಡುವ ದೃಷ್ಟಿಯಿಂದ ಸಂಘಟನೆಯೊಂದು ಕುಂದಾಪುರದ ಪರಿಸರದಲ್ಲಿ ಹುಟ್ಟಿಕೊಂಡಿರುವುದು ಸಂತéೋಷದ ಸಂಗತಿ. ಮಂದಾತರ್ಿ ಸಮೀಪದ ನಡೂರಿನ ಯಕ್ಷಸಿರಿ ಯಕ್ಷಗಾನ ಚಿಕ್ಕಮೇಳ ಈ ಹೊಣೆ ಹೊತ್ತಿದೆ. ಮಂದಾತರ್ಿ ಮೇಳದ ಕಲಾವಿದ ದಿನಕರ ಕುಂದರ್ ಈ ಪುನರುಜ್ಜೀವ ಕ್ರಿಯೆಯ ಮುಂಚೂಣಿಯಲ್ಲಿದ್ದಾರೆ. ಆಲೂರು ಸುರೇಶ್, ಬುಕ್ಕಿಗುಡ್ಡೆ ಮಹಾಬಲ, ಕೆರಾಡಿ ವಿಶ್ವನಾಥ, ಜಯರಾಮ ಶಂಕರನಾರಾಯಣ ಮೊದಲಾದವರು ಚಿಕ್ಕಮೇಳದಲ್ಲಿ ಕಲಾವಿದರಾಗಿ ಜೀವತುಂಬಲು ಶ್ರಮಿಸುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ನಾಶವಾಗುತ್ತಿದೆ ಎಂಬ ಕೂಗು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.ಈ ನಿರಾಶೆಯ ಕಾರ್ಮೋಡದ ನಡುವೆಯೂ ಈ ಕಲಾವಿದರ ಶ್ರಮ ಹೊಸ ಆಶಾಕಿರಣವನ್ನು ಮೂಡಿಸುತ್ತಿದೆ. ಮರೆಯಾಗುತ್ತಿರುವ ಈ ಕಲೆಯ ಉಳಿಸುವಿಕೆಗೆ ಶ್ರಮಿಸುತ್ತಿರುವ ಇವರನ್ನು ಅಭಿನಂದಿಸೋಣ.

ಡಾ.ಶ್ರೀಕಾಂತ್ ಸಿದ್ದಾಪುರ.
ಮಂಗಳವಾರ, ಅಕ್ಟೋಬರ್ 11, 2011
ಬುಧವಾರ, ಅಕ್ಟೋಬರ್ 5, 2011
PPC two students in International Conference held at Bangalore on sep 14,15,16 2011
ಅಂತಾರಾಷ್ಟ್ರೀಯ ಸಂಕಿರಣದಲ್ಲಿ ಪಿಪಿಸಿ ವಿದ್ಯಾರ್ಥಿಗಳು
ಉಡುಪಿ :ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಅಂತಿಮ ಬಿ.ಎಸ್ಸಿ ಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾಥರ್ಿಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪರಿಸರ ಸಂರಕ್ಷಣಾ ವಿಜ್ಞಾನದ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುತ್ತಾರೆ. ವಿನಯ್ ಜಿ.ಎನ್. ಮತ್ತು ವಿಘ್ನೇಶ್ವರ ಗಾಂವ್ಕರ್ ಇವರು ಸಿದ್ಧಪಡಿಸಿದ ಪರಿಸರ ಸಂರಕ್ಷಣೆಯಲ್ಲಿ ನಾಗಬನದ ಪಾತ್ರ ಪ್ರಬಂಧದ ಆಧಾರದಲ್ಲಿ ಆಯ್ಕೆಯಾಗಿದ್ದರು. ಯುವ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಆಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಈ ಸಂಕಿರಣವನ್ನು ಆಯೋಜಿಸಿತ್ತು. ವಿಶ್ವದ ವಿವಿಧ ದೇಶಗಳ ಪರಿಸರ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಂಕಿರಣದಲ್ಲಿ ಕರ್ನಾಟಕದ ಪದವಿ ಕಾಲೇಜುಗಳಿಂದ ಈ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಮಂಗಳವಾರ, ಅಕ್ಟೋಬರ್ 4, 2011
ಸೋಮವಾರ, ಅಕ್ಟೋಬರ್ 3, 2011
ಬುಧವಾರ, ಸೆಪ್ಟೆಂಬರ್ 28, 2011
ಸೋಮವಾರ, ಸೆಪ್ಟೆಂಬರ್ 26, 2011
Amazing Vesta - New Close-Up Look at the Asteroid | Space.com
ಭಾನುವಾರ, ಸೆಪ್ಟೆಂಬರ್ 25, 2011
Dr. Kambara was in PPC
ಶ್ರೀ ಕೃಷ್ಣನ ನೆಲದಲ್ಲಿ ಕಂಬಾರರ ನೆನಪು
ಡಾ.ಶ್ರೀಕಾಂತ್ ಸಿದ್ದಾಪುರ
ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದು ಕನ್ನಡಿಗರಿಗೆ ಸಂತಸದ ವಿಷಯ. ಕಂಬಾರರೊಂದಿಗಿನ ಸಂಬಂಧದ ಕುರಿತಂತೆ ನಾನಾ ರೀತಿಯ ನೆನಪುಗಳು ಅವರ ಅಭಿಮಾನಿಗಳಿಂದ ರೆಕ್ಕೆ ಬಿಚ್ಚಿಕೊಳ್ಳುತ್ತಿವೆ. ಕರಾವಳಿಯ ಕೃಷ್ಣನ ನಾಡಾದ ಉಡುಪಿಯೂ ಇದೀಗ ಹೆಮ್ಮೆಯಿಂದ ಕಂಬಾರರನ್ನು ಅಭಿನಂದಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಂಬಾರರಿಗೂ, ಉಡುಪಿಗೂ ಇದ್ದ ನಂಟು, ಬಾಂಧವ್ಯ.
ಹುಬ್ಬೇರಿಸಬೇಡಿ. ಉತ್ತರ ಕನರ್ಾಟಕದ ಕಂಬಾರರಿಗೆ ಉಡುಪಿಯೊಂದಿಗೆ ಅದೆಂತಹ ಬಾಂಧವ್ಯ ?. ಈ ಬಾಂಧವ್ಯ ವೃತ್ತಿ ಸಂಬಂಧ ಬೆಳೆದು ಬಂದುದು. ಡಾ. ಕಂಬಾರರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಕೆಲವು ತಿಂಗಳು ಕನ್ನಡ ಬೋಧಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಆಗ ಇದರ ಅಧ್ಯಕ್ಷರು. ಕಾಲೇಜನ್ನು ಎತ್ತರಕ್ಕೆ ಬೆಳೆಸಬೇಕೆಂಬ ಹಂಬಲ ಹೊತ್ತವರು. ನಾಡಿನ ಮೂಲೆಯಲ್ಲಿರುವ ಪ್ರತಿಭೆಗಳನ್ನು ತಮ್ಮ ಕಾಲೇಜಿನತ್ತ ಸೆಳೆಯುವ ಹುಡುಕಾಟದಲ್ಲಿ ನಿರತರಾಗಿದ್ದರು. ಹೀಗೆ ಕಂಬಾರರನ್ನು ಉಡುಪಿಗೆ ತಂದವರು ಶ್ರೀ ವಿಬುಧೇಶತೀರ್ಥ ಶ್ರೀಪಾದರು.
1968 ರಲ್ಲಿ ಉಡುಪಿಗೆ ಬಂದ ಕಂಬಾರರು ಇದಕ್ಕೆ ಮೊದಲು ಸಾಗರದ ಕಾಲೇಜಿನಲ್ಲಿ ದುಡಿಯುತ್ತಿದ್ದರು. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಏಕೆ ಸೇರಬಾರದು ? ಎಂದು ಕಂಬಾರರನ್ನು ಕೆಣಕಿದರು. ಅಡಿಗರ ಸೂಚನೆಯ ಮೇರೆಗೆ ಉಡುಪಿಗೆ ಬಂದ ಕಂಬಾರರನ್ನು ಕಾಲೇಜಿನಲ್ಲಿ ಸ್ವಾಗತಿಸಿದವರು ಅಂದಿನ ಪ್ರಾಂಶುಪಾಲ ಶಂಕರ್ ಮೊಕಾಶಿಯವರು. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಆದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡದ ಧೀಮಂತ ಸಾಹಿತಿ ಡಾ.ರಾಜಪುರೋಹಿತ್ ಆಗಷ್ಟೇ ಪಿಪಿಸಿ ಯನ್ನು ತೊರೆದು, ಕೇರಳ ವಿ.ವಿ.ಯತ್ತ ಹೊರಟಿದ್ದರು. ಈ ಸ್ಥಾನವನ್ನು ಕಂಬಾರರು ಭತರ್ಿ ಮಾಡಿದರು. ಮೊಕಾಶಿಯವರು ಮುಂಬೈಗೆ ತೆರಳಿದ ಬಳಿಕ ಅಡಿಗರು ಪಿಪಿಸಿಯ ಪ್ರಾಂಶುಪಾಲರಾದರು. ಕಂಬಾರರಿಗೆ ಅಂದು ದೊರೆತ ಈ ಇಬ್ಬರ ಒಡನಾಟವು ಸಾಹಿತ್ಯದ ಕುರಿತು ಹೊಸ ಹುರುಪನ್ನು ಕಂಬಾರರಲ್ಲಿ ಬೆಳೆಸಿತು.
ಕಂಬಾರರೊಂದಿಗೆ ಅಂದು ಸೇವೆ ಸಲ್ಲಿಸಿದ್ದ ಪಿಪಿಸಿ ಯ ಹಲವು ಅಧ್ಯಾಪಕರು ಇದೀಗ ಕಂಬಾರರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾರೆ. ನಿವೃತ್ತ ಹಿಂದಿ ಉಪನ್ಯಾಸಕ ಶ್ರೀ ನಟರಾಜ ದೀಕ್ಷಿತ್ ಕಂಬಾರರ ಬಗ್ಗೆ ಹೀಗೆ ನೆನಪಿಸಿಕೊಳ್ಳುತ್ತಾರೆ. ಕಂಬಾರರು ಅಂದು ಉದಯೋನ್ಮುಖ ಕವಿ. ಅವರ ಕಂಠ ಸಾಕಷ್ಟು ಮಧುರವಾಗಿತ್ತು. ತರಗತಿಯಲ್ಲಿ ಧಾರವಾಡ ಸೊಗಸಾದ ಕನ್ನಡವನ್ನು ಅವರ ಬಾಯಿಯಿಂದ ಕೇಳುವುದೆಂದರೆ ವಿದ್ಯಾಥರ್ಿಗಳಿಗೆ ಅತ್ಯಂತ ಖುಷಿ. ಡಾ.ಎಸ್.ಎಲ್. ಕಣರ್ೀಕರು ಕಂಬಾರರು ಸೇರಿದ ವರ್ಷವೇ ಪಿಪಿಸಿಯ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿಕೊಂಡವರು. ಆಗ ವಿಜ್ಞಾನದ ವಿಭಾಗವು ವಳಕಾಡಿನಲ್ಲಿತ್ತು. ಉಳಿದವು ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಂಬಾರರು ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಕನ್ನಡ ಭಾಷೆ ಬೋಧಿಸಲು ಇಲ್ಲಿಗೆ ಬರುತ್ತಿದ್ದರು. ಹಾಗೆ ಬಂದಾಗ ನನ್ನ ಮತ್ತು ಇತರ ವಿಜ್ಞಾನದ ಉಪನ್ಯಾಸಕರೊಂದಿಗೆ ಕೆಲವು ಹೊತ್ತು ಮಾತನಾಡುತ್ತಿದ್ದರು.
ಜನವರಿ 9, 2000 ದಂದು ನಡೆದ ಪಿಪಿಸಿಯ ವಾಷರ್ಿಕೋತ್ಸವಕ್ಕೆ ಕಂಬಾರರೇ ಮುಖ್ಯ ಅತಿಥಿ. ಡಾ.ಎಸ್.ಎಲ್. ಕಣರ್ೀಕ್ ಅಂದು ಪ್ರಾಂಶುಪಾಲರು. ಕಂಬಾರರು ಅಂದು ಪಿಪಿಸಿ ಯ ತನ್ನ ಹಿಂದಿನ ದಿನಗಳನ್ನು ಮೆಲುಕು ಹಾಕಿದುದನ್ನು ಕಣರ್ೀಕರು ನೆನಪಿಸಿಕೊಳ್ಳುತ್ತಾರೆ. ವಿಶೇಷವಾಗಿ ಬಿ.ಬಿ. ರಾಜಪುರೋಹಿತರ ನೆನಪು ಅವರನ್ನು ಕಾಡಿತ್ತಂತೆ.
ಅಡಿಗರು ಪ್ರಾಂಶುಪಾಲರಾಗಿದ್ದ ಸಮಯ. ಕಂಬಾರರಿಗೆ ಚಿಕಾಗೋ ವಿ.ವಿ. ಗೆ ವಿಶೇಷ ಅಧ್ಯಯನಕ್ಕೆ ಹೋಗುವ ಕಾಲ ಕೂಡಿ ಬಂದಿತು. ಫುಲ್ ಬ್ರೈಟ್ ವಿದ್ಯಾಥರ್ಿವೇತನದೊಂದಿಗೆ ಅಮೆರಿಕಾಕ್ಕೆ ತೆರಳಲಿರುವ ಕಂಬಾರರನ್ನು ಶ್ರೀ ವಿಬುಧೇಶತೀರ್ಥರು ಈ ಸಂದರ್ಭದಲ್ಲಿ ಪ್ರೋತ್ಸಾಹಿಸಿದರು. ಕಂಬಾರರು ಚಿಕಾಗೋ ವಿ.ವಿ. ಗೆ ಹೋದ ಅಂದಿನ ದಿನಗಳನ್ನು ನೆನಪಿಸಿಕೊಳ್ಳುವ ನಟರಾಜ ದೀಕ್ಷಿತ್ ಚಿಕಾಗೋದಲ್ಲಿ ಅದು ಭಾರತದ ಭಾಷೆಗಳ ಅಧ್ಯಯನ ಕೇಂದ್ರವಾಗಿತ್ತು. ಕಂಬಾರರು ಅಲ್ಲಿಗೆ ಸೇರಿಕೊಂಡ ನಂತರವೂ ಆಗಾಗ ನನ್ನೊಡನೆ ತಮ್ಮ ಅಮೆರಿಕಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಒಮ್ಮೆ ನನಗೂ ಚಿಕಾಗೋಗೆ ಬರುವಂತೆ ಕೇಳಿಕೊಂಡರು. ಆಗ ಅಧ್ಯಯನಕ್ಕಾಗಿ 12 ಡಾಲರ್ ತೆರಬೇಕಾಗಿತ್ತು. ಕಂಬಾರರೇ ಈ ವಿಷಯ ತಿಳಿಸಿ ಅಮೆರಿಕಾಕ್ಕೆ ಬರುವಂತೆ ಆಹ್ವಾನಿಸಿದರೂ, ನನಗೆ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೌಟುಂಬಿಕ ಸಮಸ್ಯೆ. ಕಂಬಾರರು ಸುಮಾರು ಒಂಬತ್ತು ತಿಂಗಳು ಅಮೆರಿಕಾದಲ್ಲಿದ್ದರು. ಅನಂತರ ಅವರು ಉಡುಪಿಗೆ ಬಂದಾಗ ಶ್ರೀ ವಿಬುಧೇಶತೀರ್ಥರು ಅವರನ್ನು ಸನ್ಮಾನಿಸಿದ್ದರು.
ಕಂಬಾರರೊಂದಿಗೆ ಅಂದು ಪಿಪಿಸಿ ಯಲ್ಲಿ ದುಡಿಯುತ್ತಿದ್ದ ಪ್ರಮುಖರೆಂದರೆ ಡಾ.ಎನ್.ಎ. ಮಧ್ಯಸ್ಥ, ವರದರಾಜ ಬಲ್ಲಾಳ್, ಎಂ. ರಾಜಗೋಪಾಲ ಆಚಾರ್ಯ ಮೊದಲಾದವರು. ಡಾ.ಚಂದ್ರಶೇಖರ ಕಂಬಾರರಿಗೆ ಕನ್ನಡದ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಉಡುಪಿಯ ಜನತೆ ಎದೆತುಂಬಿ ಕಂಬಾರರನ್ನು ಅಭಿನಂದಿಸುತ್ತಿದ್ದಾರೆ. ಅವರ ಪಾಲಿಗೆ ಇವ ನಮ್ಮವ ಇವ ನಮ್ಮವ. ಅವರನ್ನು ಮತ್ತೊಮ್ಮೆ ಅಭಿನಂದಿಸೋಣ.

ಶನಿವಾರ, ಸೆಪ್ಟೆಂಬರ್ 24, 2011
ಗುರುವಾರ, ಸೆಪ್ಟೆಂಬರ್ 22, 2011
ಬುಧವಾರ, ಸೆಪ್ಟೆಂಬರ್ 21, 2011
: ಡಾ.ಕಂಬಾರ ಮತ್ತು ಪಿಪಿಸಿ
srikanthsiddapura: ಡಾ.ಕಂಬಾರ ಮತ್ತು ಪಿಪಿಸಿ: ಡಾ.ಚಂದ್ರಶೇಖರ ಕಂಬಾರ್ ಮತ್ತು ಪೂರ್ಣಪ್ರಜ್ಞ ಕಾಲೇಜು 1967-68 ರ ಕಾಲ. ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಬಿ.ಬಿ. ಪುರೋಹಿತ್ ಕೇ...
ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಕೃತಜ್ಞತಾ ಸಮರ್...
srikanthsiddapura: ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಕೃತಜ್ಞತಾ ಸಮರ್...: ಕೃತಜ್ಞತಾ ಸಮರ್ಪಣಾ ಸಮಾರಂಭ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ- 9-09-2011
ಸೋಮವಾರ, ಸೆಪ್ಟೆಂಬರ್ 19, 2011
Twelve new frog species found in Western Ghats
ಬುಧವಾರ, ಸೆಪ್ಟೆಂಬರ್ 14, 2011
- PHYSICS Informations and Links: IISER Kolkata, Indian Institute of Science Educati...
- PHYSICS Informations and Links: IISER Kolkata, Indian Institute of Science Educati...: Applications are invited for the Ph. D. Programme for the academic session 2012, spring semester for biological sciences, chemical sciences...
Chandra finds nearest pair of supermassive black holes
ಸೋಮವಾರ, ಸೆಪ್ಟೆಂಬರ್ 12, 2011
ISRO gears up for launch of Megha-Tropiques weather satellite -
ಅಡಿಗ ಕಾವ್ಯ ಕಮ್ಮಟ (4-09-2011 ಭಾನುವಾರ) ಗಾಯನ ತರಬೇತಿ
srikanthsiddapura: ಅಡಿಗ ಕಾವ್ಯ ಕಮ್ಮಟ (4-09-2011 ಭಾನುವಾರ) ಗಾಯನ ತರಬೇತಿ: ಎಂ.ಗೋಪಾಲಕೃಷ್ಣ ಅಡಿಗ ಕಾವ್ಯಕಮ್ಮಟ ಮಂಗಳೂರು ವಿ.ವಿ.ಮಟ್ಟದ ಕಾರ್ಯಾಗಾರ
ಶುಕ್ರವಾರ, ಸೆಪ್ಟೆಂಬರ್ 9, 2011
ಶನಿವಾರ, ಸೆಪ್ಟೆಂಬರ್ 3, 2011
ಗುರುವಾರ, ಸೆಪ್ಟೆಂಬರ್ 1, 2011
ಬುಧವಾರ, ಆಗಸ್ಟ್ 31, 2011
ಶುಕ್ರವಾರ, ಆಗಸ್ಟ್ 26, 2011
ಗುರುವಾರ, ಆಗಸ್ಟ್ 25, 2011
ಬುಧವಾರ, ಆಗಸ್ಟ್ 24, 2011
ಶುಕ್ರವಾರ, ಆಗಸ್ಟ್ 19, 2011
ಗುರುವಾರ, ಆಗಸ್ಟ್ 18, 2011
ಮಂಗಳವಾರ, ಆಗಸ್ಟ್ 16, 2011
ಭಾನುವಾರ, ಆಗಸ್ಟ್ 14, 2011
ಮಂಗಳವಾರ, ಆಗಸ್ಟ್ 9, 2011
ಭಾನುವಾರ, ಆಗಸ್ಟ್ 7, 2011
ಶುಕ್ರವಾರ, ಆಗಸ್ಟ್ 5, 2011
Researchers create mice from artificial sperm cells
ಮಂಗಳವಾರ, ಆಗಸ್ಟ್ 2, 2011
ಭಾನುವಾರ, ಜುಲೈ 31, 2011
ಗುರುವಾರ, ಜುಲೈ 28, 2011
Japanese Researchers Build an EV Engine That Contains No Rare Earth
Universe's Largest Water Reservoir Discovered in Black Hole
ಬುಧವಾರ, ಜುಲೈ 27, 2011
ಶನಿವಾರ, ಜುಲೈ 23, 2011
ಗುರುವಾರ, ಜುಲೈ 21, 2011
ಬುಧವಾರ, ಜುಲೈ 20, 2011
ಶುಕ್ರವಾರ, ಜುಲೈ 15, 2011
ಗುರುವಾರ, ಜುಲೈ 14, 2011
ಬುಧವಾರ, ಜುಲೈ 13, 2011
ಸೋಮವಾರ, ಜುಲೈ 4, 2011
ಗುರುವಾರ, ಜೂನ್ 30, 2011
PI-- TAU
Prajavani[ kannada] Nagesh Hegade
ಭಾನುವಾರ, ಜೂನ್ 19, 2011
ಬುಧವಾರ, ಜೂನ್ 15, 2011
ಮಂಗಳವಾರ, ಜೂನ್ 14, 2011
ಸೋಮವಾರ, ಜೂನ್ 13, 2011
ಬುಧವಾರ, ಜೂನ್ 8, 2011
ಬುಧವಾರ, ಮೇ 18, 2011
ಗುರುವಾರ, ಮೇ 12, 2011
sky watch- may 12th- may 16th- Dr A P Bhat
may 12th- morning at 5. 30 in eastern sky, near horizon see jupitor and venus
may 16th- mercury and mars along with venus
dr a p bhat- poornaprajna college udupi
mobile- 9448309077

ಬುಧವಾರ, ಮೇ 4, 2011
ಸೋಮವಾರ, ಮೇ 2, 2011
ಬುಧವಾರ, ಏಪ್ರಿಲ್ 20, 2011
Gentle giant- john willlard milnor
Gentle giant- john willard milnor-abel prize[ mathematian's nobel] winner
ಶನಿವಾರ, ಏಪ್ರಿಲ್ 16, 2011
ಬುಧವಾರ, ಏಪ್ರಿಲ್ 6, 2011
ಭಾನುವಾರ, ಏಪ್ರಿಲ್ 3, 2011
ಮಂಗಳವಾರ, ಮಾರ್ಚ್ 29, 2011
ಭಾನುವಾರ, ಮಾರ್ಚ್ 20, 2011
ಗುರುವಾರ, ಮಾರ್ಚ್ 17, 2011
ಭಾನುವಾರ, ಮಾರ್ಚ್ 13, 2011
ಬುಧವಾರ, ಮಾರ್ಚ್ 9, 2011
ಬುಧವಾರ, ಮಾರ್ಚ್ 2, 2011
ಭಾನುವಾರ, ಫೆಬ್ರವರಿ 27, 2011
ಶುಕ್ರವಾರ, ಫೆಬ್ರವರಿ 25, 2011
ಗುರುವಾರ, ಫೆಬ್ರವರಿ 24, 2011
ಮಂಗಳವಾರ, ಫೆಬ್ರವರಿ 22, 2011
ಸೋಮವಾರ, ಫೆಬ್ರವರಿ 21, 2011
naac peer committee visit to poornaprajna college udupi-10-2-2011
ಬುಧವಾರ, ಫೆಬ್ರವರಿ 16, 2011
ಮಂಗಳವಾರ, ಫೆಬ್ರವರಿ 15, 2011
ಶುಕ್ರವಾರ, ಫೆಬ್ರವರಿ 11, 2011
ಗುರುವಾರ, ಫೆಬ್ರವರಿ 10, 2011
ಬುಧವಾರ, ಫೆಬ್ರವರಿ 9, 2011
ಮಂಗಳವಾರ, ಫೆಬ್ರವರಿ 8, 2011
flora of udupi - dr k g bhat
this book would be an invaluable resource in days to come , not only for the technical experts, but for the general public as well, when we ernestly set about the task of documenting local biodiversity resourses throuhout lenght and breadth of our sub continent as part of implimentaion of newly passed biodivesity act 2002-
-- DR MADHAVA GADGIL
-- DR MADHAVA GADGIL
paatatagittigalu - pakshigalu- dr n a madhyastha[2006]
ಸೋಮವಾರ, ಫೆಬ್ರವರಿ 7, 2011
ವಿಜ್ನಾನ ಸಂಗಾತಿ- ಮಾಸ ಪತ್ರಿಕೆ
VIJNAANA SANGAATI[kannada]
[monthly science journal]
editor- suresh v kulkarni
published by
the director
prasaaranga
kannada university
hampi, vidyaranya- 583276
karnataka
yearly subsription-rs150
send d, m o to - finance officer,
prasarnga, kannada univesty, hampi,vidyraranya-583276
hospet taluk- karnataka

ಭಾನುವಾರ, ಫೆಬ್ರವರಿ 6, 2011
haavu naavu[a book of snakes in kannada by gururaja sanil[2010]
HAAVU NAAVU
[ a book of snakes of undivided dakshina kannada]
- gururaj sanil
mobile-9845083869
email- gururaj.sanil@yahoo.com
published by
geetha prakashana
kolambe, puttur
santhekatte post
udupi-576105
price- rs 300
first edition- 2010
pages-184
photos- gururaj sanil,
cover page design-kallur naagesh

mayeya mukhagalu[ a photo album] by k p poornachandra tejaswi[2010]
ಶುಕ್ರವಾರ, ಫೆಬ್ರವರಿ 4, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)