ಸೋಮವಾರ, ಜುಲೈ 29, 2013

ಕನ್ನಡದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ

ಜುಲೈ 24, ಬುಧವಾರ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸಮಾರಂಭ. ಮುಖ್ಯ ಅಭ್ಯಾಗತರು ಡಾ.ರವಿರಾಜ ಶೆಟ್ಟಿ. 2012-13 ನೇ ಸಾಲಿನ ಮಂಗಳೂರು ವಿ.ವಿ. ಪದವಿ ಪರೀಕ್ಷೆಯಲ್ಲಿ  ಕನ್ನಡದಲ್ಲಿ ಅಧಿಕ  ಅಂಕ ಪಡೆದ ಪಿಪಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆ ಶ್ರೀ ಕೆ.ಸದಾಶಿವ ರಾವ್, ಪ್ರಾಂಶುಪಾಲರು. ವೇದಿಕೆಯಲ್ಲಿ ಹಿರಿಯ  ಉಪನ್ಯಾಸಕ ಪ್ರೊ.ಮುರಳೀಧರ  ಉಪಾಧ್ಯ,ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ  ಉಪಸ್ಥಿತರಿದ್ದರು.

ಡಿ. ಜಿ.ಹೆಗಡೆ ನೆನಪು -ಪಿ. ಪಿ.ಸಿ- ಕಾಲೇಜ್ ಡೇ -2002

With D. G. Hegade -Poornaprajna College Day-2002

ಶನಿವಾರ, ಜುಲೈ 13, 2013

ಉತ್ತರಖಾಂಡ ಸಂತ್ರಸ್ಥರಿಗೆ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ನೆರವು

ಉತ್ತರಖಾಂಡ ಸಂತ್ರಸ್ಥರಿಗೆ ಅದಮಾರು ಮಠ ಶಿಕ್ಷಣ ಸಂಸ್ಥೆಗಳು 11, 50,000/ ರೂ.ಗಳ ಆರ್ಥಿಕ ನೆರವನ್ನು ನೀಡಿವೆ.  ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ  ಅಧ್ಯಕ್ಷ  ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ ಕಲ್ಯಾಣ ನಿಧಿಗೆ ಈ ಮೊತ್ತವನ್ನು ಹಸ್ತಾಂತರಿಸಿದರು.

ಶುಕ್ರವಾರ, ಜುಲೈ 12, 2013

ದತ್ತಿ ಉಪನ್ಯಾಸ

11-07-2013 ರಂದು ಪಿಪಿಸಿಯಲ್ಲಿ ನಡೆದ ಎರ್ಮಾಳುಬೀಡು ದಿ. ಶಾಂತರಾಜ ಅರಸು ಮಾರಮ್ಮ ಹೆಗ್ಗಡೆಯವರ ಧರ್ಮಪತ್ನಿ ದಿ. ನಾಗವೇಣಿ ಅಮ್ಮ  ಇವರ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ದತ್ತಿ ಉಪನ್ಯಾಸದಲ್ಲಿ ಮಹಾಭಾರತದಲ್ಲಿ ಜೀವನ  ಮೌಲ್ಯಗಳು ಎಂಬ ವಿಷಯದ ಕುರಿತು ವಿದ್ವಾನ್ ಗಂಗಾಧರ ಭಟ್ ಮಾತನಾಡಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಸೂರಜ್ರಾಜ್  ಎರ್ಮಾಳು ಉಪಸ್ಥಿತರಿದ್ದರು.

ಬುಧವಾರ, ಜುಲೈ 3, 2013

ಶ್ರೀ ವಿಬುಧೇಶತೀರ್ಥರಿಗೆ ನಮನ

POORNAPRAJNA COLLEGE UDUPI
  FOUNDER"S DAY - 4-7-2013-9.15am
 Homage To SRI VIBUDHESHATHEERTHA SWAMIJI
 CHIEF GUEST- 
                          PRO. UDYAVARA MADHAVA ACHARYA
       Venue- MINI AUDITORIUM
 Welcome

ಆಭಿನಂದನೆಗಳು-Ka.Sa. Pa. Dattinidhi Award to PRAJNA MARPALLY

M/s PRAJNA MARPALLY { Deparment of Kannada , Poornaprajna College, Udupi } recieved  K. S. Bharathi Rajaram Madhyastha Dattinidhi  Prashsthi for her Kannada Novel -  ALEGALU {ಅಲೆಗಳು }
 Congrats to Prajna Marpally
         -aryabhatappc. blogspot.in