muraleedhara upadhya hiriadka: ರವೀಂದ್ರ ಉತ್ಸವ-- Rabindra Utsav At Manipal- Sep 29th- to octo-3rd, 2011:
'via Blog this'
ಆರ್ಯಭಟ, ಪೂರ್ಣಪ್ರಜ್ಞ ಕಾಲೇಜು, ಉಡುಪಿ _ POORNAPRAJNA COLLEGE , UDUPI -This blog publishes Popular Science, Research , Arts, Humanities,Commerce, Management,& career Guidance articles in Kannada & English
ಬುಧವಾರ, ಸೆಪ್ಟೆಂಬರ್ 28, 2011
ಸೋಮವಾರ, ಸೆಪ್ಟೆಂಬರ್ 26, 2011
Amazing Vesta - New Close-Up Look at the Asteroid | Space.com
ಭಾನುವಾರ, ಸೆಪ್ಟೆಂಬರ್ 25, 2011
Dr. Kambara was in PPC
ಶ್ರೀ ಕೃಷ್ಣನ ನೆಲದಲ್ಲಿ ಕಂಬಾರರ ನೆನಪು
ಡಾ.ಶ್ರೀಕಾಂತ್ ಸಿದ್ದಾಪುರ
ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದು ಕನ್ನಡಿಗರಿಗೆ ಸಂತಸದ ವಿಷಯ. ಕಂಬಾರರೊಂದಿಗಿನ ಸಂಬಂಧದ ಕುರಿತಂತೆ ನಾನಾ ರೀತಿಯ ನೆನಪುಗಳು ಅವರ ಅಭಿಮಾನಿಗಳಿಂದ ರೆಕ್ಕೆ ಬಿಚ್ಚಿಕೊಳ್ಳುತ್ತಿವೆ. ಕರಾವಳಿಯ ಕೃಷ್ಣನ ನಾಡಾದ ಉಡುಪಿಯೂ ಇದೀಗ ಹೆಮ್ಮೆಯಿಂದ ಕಂಬಾರರನ್ನು ಅಭಿನಂದಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಂಬಾರರಿಗೂ, ಉಡುಪಿಗೂ ಇದ್ದ ನಂಟು, ಬಾಂಧವ್ಯ.
ಹುಬ್ಬೇರಿಸಬೇಡಿ. ಉತ್ತರ ಕನರ್ಾಟಕದ ಕಂಬಾರರಿಗೆ ಉಡುಪಿಯೊಂದಿಗೆ ಅದೆಂತಹ ಬಾಂಧವ್ಯ ?. ಈ ಬಾಂಧವ್ಯ ವೃತ್ತಿ ಸಂಬಂಧ ಬೆಳೆದು ಬಂದುದು. ಡಾ. ಕಂಬಾರರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಕೆಲವು ತಿಂಗಳು ಕನ್ನಡ ಬೋಧಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಆಗ ಇದರ ಅಧ್ಯಕ್ಷರು. ಕಾಲೇಜನ್ನು ಎತ್ತರಕ್ಕೆ ಬೆಳೆಸಬೇಕೆಂಬ ಹಂಬಲ ಹೊತ್ತವರು. ನಾಡಿನ ಮೂಲೆಯಲ್ಲಿರುವ ಪ್ರತಿಭೆಗಳನ್ನು ತಮ್ಮ ಕಾಲೇಜಿನತ್ತ ಸೆಳೆಯುವ ಹುಡುಕಾಟದಲ್ಲಿ ನಿರತರಾಗಿದ್ದರು. ಹೀಗೆ ಕಂಬಾರರನ್ನು ಉಡುಪಿಗೆ ತಂದವರು ಶ್ರೀ ವಿಬುಧೇಶತೀರ್ಥ ಶ್ರೀಪಾದರು.
1968 ರಲ್ಲಿ ಉಡುಪಿಗೆ ಬಂದ ಕಂಬಾರರು ಇದಕ್ಕೆ ಮೊದಲು ಸಾಗರದ ಕಾಲೇಜಿನಲ್ಲಿ ದುಡಿಯುತ್ತಿದ್ದರು. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಏಕೆ ಸೇರಬಾರದು ? ಎಂದು ಕಂಬಾರರನ್ನು ಕೆಣಕಿದರು. ಅಡಿಗರ ಸೂಚನೆಯ ಮೇರೆಗೆ ಉಡುಪಿಗೆ ಬಂದ ಕಂಬಾರರನ್ನು ಕಾಲೇಜಿನಲ್ಲಿ ಸ್ವಾಗತಿಸಿದವರು ಅಂದಿನ ಪ್ರಾಂಶುಪಾಲ ಶಂಕರ್ ಮೊಕಾಶಿಯವರು. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಆದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡದ ಧೀಮಂತ ಸಾಹಿತಿ ಡಾ.ರಾಜಪುರೋಹಿತ್ ಆಗಷ್ಟೇ ಪಿಪಿಸಿ ಯನ್ನು ತೊರೆದು, ಕೇರಳ ವಿ.ವಿ.ಯತ್ತ ಹೊರಟಿದ್ದರು. ಈ ಸ್ಥಾನವನ್ನು ಕಂಬಾರರು ಭತರ್ಿ ಮಾಡಿದರು. ಮೊಕಾಶಿಯವರು ಮುಂಬೈಗೆ ತೆರಳಿದ ಬಳಿಕ ಅಡಿಗರು ಪಿಪಿಸಿಯ ಪ್ರಾಂಶುಪಾಲರಾದರು. ಕಂಬಾರರಿಗೆ ಅಂದು ದೊರೆತ ಈ ಇಬ್ಬರ ಒಡನಾಟವು ಸಾಹಿತ್ಯದ ಕುರಿತು ಹೊಸ ಹುರುಪನ್ನು ಕಂಬಾರರಲ್ಲಿ ಬೆಳೆಸಿತು.
ಕಂಬಾರರೊಂದಿಗೆ ಅಂದು ಸೇವೆ ಸಲ್ಲಿಸಿದ್ದ ಪಿಪಿಸಿ ಯ ಹಲವು ಅಧ್ಯಾಪಕರು ಇದೀಗ ಕಂಬಾರರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾರೆ. ನಿವೃತ್ತ ಹಿಂದಿ ಉಪನ್ಯಾಸಕ ಶ್ರೀ ನಟರಾಜ ದೀಕ್ಷಿತ್ ಕಂಬಾರರ ಬಗ್ಗೆ ಹೀಗೆ ನೆನಪಿಸಿಕೊಳ್ಳುತ್ತಾರೆ. ಕಂಬಾರರು ಅಂದು ಉದಯೋನ್ಮುಖ ಕವಿ. ಅವರ ಕಂಠ ಸಾಕಷ್ಟು ಮಧುರವಾಗಿತ್ತು. ತರಗತಿಯಲ್ಲಿ ಧಾರವಾಡ ಸೊಗಸಾದ ಕನ್ನಡವನ್ನು ಅವರ ಬಾಯಿಯಿಂದ ಕೇಳುವುದೆಂದರೆ ವಿದ್ಯಾಥರ್ಿಗಳಿಗೆ ಅತ್ಯಂತ ಖುಷಿ. ಡಾ.ಎಸ್.ಎಲ್. ಕಣರ್ೀಕರು ಕಂಬಾರರು ಸೇರಿದ ವರ್ಷವೇ ಪಿಪಿಸಿಯ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿಕೊಂಡವರು. ಆಗ ವಿಜ್ಞಾನದ ವಿಭಾಗವು ವಳಕಾಡಿನಲ್ಲಿತ್ತು. ಉಳಿದವು ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಂಬಾರರು ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಕನ್ನಡ ಭಾಷೆ ಬೋಧಿಸಲು ಇಲ್ಲಿಗೆ ಬರುತ್ತಿದ್ದರು. ಹಾಗೆ ಬಂದಾಗ ನನ್ನ ಮತ್ತು ಇತರ ವಿಜ್ಞಾನದ ಉಪನ್ಯಾಸಕರೊಂದಿಗೆ ಕೆಲವು ಹೊತ್ತು ಮಾತನಾಡುತ್ತಿದ್ದರು.
ಜನವರಿ 9, 2000 ದಂದು ನಡೆದ ಪಿಪಿಸಿಯ ವಾಷರ್ಿಕೋತ್ಸವಕ್ಕೆ ಕಂಬಾರರೇ ಮುಖ್ಯ ಅತಿಥಿ. ಡಾ.ಎಸ್.ಎಲ್. ಕಣರ್ೀಕ್ ಅಂದು ಪ್ರಾಂಶುಪಾಲರು. ಕಂಬಾರರು ಅಂದು ಪಿಪಿಸಿ ಯ ತನ್ನ ಹಿಂದಿನ ದಿನಗಳನ್ನು ಮೆಲುಕು ಹಾಕಿದುದನ್ನು ಕಣರ್ೀಕರು ನೆನಪಿಸಿಕೊಳ್ಳುತ್ತಾರೆ. ವಿಶೇಷವಾಗಿ ಬಿ.ಬಿ. ರಾಜಪುರೋಹಿತರ ನೆನಪು ಅವರನ್ನು ಕಾಡಿತ್ತಂತೆ.
ಅಡಿಗರು ಪ್ರಾಂಶುಪಾಲರಾಗಿದ್ದ ಸಮಯ. ಕಂಬಾರರಿಗೆ ಚಿಕಾಗೋ ವಿ.ವಿ. ಗೆ ವಿಶೇಷ ಅಧ್ಯಯನಕ್ಕೆ ಹೋಗುವ ಕಾಲ ಕೂಡಿ ಬಂದಿತು. ಫುಲ್ ಬ್ರೈಟ್ ವಿದ್ಯಾಥರ್ಿವೇತನದೊಂದಿಗೆ ಅಮೆರಿಕಾಕ್ಕೆ ತೆರಳಲಿರುವ ಕಂಬಾರರನ್ನು ಶ್ರೀ ವಿಬುಧೇಶತೀರ್ಥರು ಈ ಸಂದರ್ಭದಲ್ಲಿ ಪ್ರೋತ್ಸಾಹಿಸಿದರು. ಕಂಬಾರರು ಚಿಕಾಗೋ ವಿ.ವಿ. ಗೆ ಹೋದ ಅಂದಿನ ದಿನಗಳನ್ನು ನೆನಪಿಸಿಕೊಳ್ಳುವ ನಟರಾಜ ದೀಕ್ಷಿತ್ ಚಿಕಾಗೋದಲ್ಲಿ ಅದು ಭಾರತದ ಭಾಷೆಗಳ ಅಧ್ಯಯನ ಕೇಂದ್ರವಾಗಿತ್ತು. ಕಂಬಾರರು ಅಲ್ಲಿಗೆ ಸೇರಿಕೊಂಡ ನಂತರವೂ ಆಗಾಗ ನನ್ನೊಡನೆ ತಮ್ಮ ಅಮೆರಿಕಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಒಮ್ಮೆ ನನಗೂ ಚಿಕಾಗೋಗೆ ಬರುವಂತೆ ಕೇಳಿಕೊಂಡರು. ಆಗ ಅಧ್ಯಯನಕ್ಕಾಗಿ 12 ಡಾಲರ್ ತೆರಬೇಕಾಗಿತ್ತು. ಕಂಬಾರರೇ ಈ ವಿಷಯ ತಿಳಿಸಿ ಅಮೆರಿಕಾಕ್ಕೆ ಬರುವಂತೆ ಆಹ್ವಾನಿಸಿದರೂ, ನನಗೆ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೌಟುಂಬಿಕ ಸಮಸ್ಯೆ. ಕಂಬಾರರು ಸುಮಾರು ಒಂಬತ್ತು ತಿಂಗಳು ಅಮೆರಿಕಾದಲ್ಲಿದ್ದರು. ಅನಂತರ ಅವರು ಉಡುಪಿಗೆ ಬಂದಾಗ ಶ್ರೀ ವಿಬುಧೇಶತೀರ್ಥರು ಅವರನ್ನು ಸನ್ಮಾನಿಸಿದ್ದರು.
ಕಂಬಾರರೊಂದಿಗೆ ಅಂದು ಪಿಪಿಸಿ ಯಲ್ಲಿ ದುಡಿಯುತ್ತಿದ್ದ ಪ್ರಮುಖರೆಂದರೆ ಡಾ.ಎನ್.ಎ. ಮಧ್ಯಸ್ಥ, ವರದರಾಜ ಬಲ್ಲಾಳ್, ಎಂ. ರಾಜಗೋಪಾಲ ಆಚಾರ್ಯ ಮೊದಲಾದವರು. ಡಾ.ಚಂದ್ರಶೇಖರ ಕಂಬಾರರಿಗೆ ಕನ್ನಡದ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಉಡುಪಿಯ ಜನತೆ ಎದೆತುಂಬಿ ಕಂಬಾರರನ್ನು ಅಭಿನಂದಿಸುತ್ತಿದ್ದಾರೆ. ಅವರ ಪಾಲಿಗೆ ಇವ ನಮ್ಮವ ಇವ ನಮ್ಮವ. ಅವರನ್ನು ಮತ್ತೊಮ್ಮೆ ಅಭಿನಂದಿಸೋಣ.

ಶನಿವಾರ, ಸೆಪ್ಟೆಂಬರ್ 24, 2011
ಗುರುವಾರ, ಸೆಪ್ಟೆಂಬರ್ 22, 2011
ಬುಧವಾರ, ಸೆಪ್ಟೆಂಬರ್ 21, 2011
: ಡಾ.ಕಂಬಾರ ಮತ್ತು ಪಿಪಿಸಿ
srikanthsiddapura: ಡಾ.ಕಂಬಾರ ಮತ್ತು ಪಿಪಿಸಿ: ಡಾ.ಚಂದ್ರಶೇಖರ ಕಂಬಾರ್ ಮತ್ತು ಪೂರ್ಣಪ್ರಜ್ಞ ಕಾಲೇಜು 1967-68 ರ ಕಾಲ. ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಬಿ.ಬಿ. ಪುರೋಹಿತ್ ಕೇ...
ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಕೃತಜ್ಞತಾ ಸಮರ್...
srikanthsiddapura: ಶ್ರೀ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಕೃತಜ್ಞತಾ ಸಮರ್...: ಕೃತಜ್ಞತಾ ಸಮರ್ಪಣಾ ಸಮಾರಂಭ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ- 9-09-2011
ಸೋಮವಾರ, ಸೆಪ್ಟೆಂಬರ್ 19, 2011
Twelve new frog species found in Western Ghats
ಬುಧವಾರ, ಸೆಪ್ಟೆಂಬರ್ 14, 2011
- PHYSICS Informations and Links: IISER Kolkata, Indian Institute of Science Educati...
- PHYSICS Informations and Links: IISER Kolkata, Indian Institute of Science Educati...: Applications are invited for the Ph. D. Programme for the academic session 2012, spring semester for biological sciences, chemical sciences...
Chandra finds nearest pair of supermassive black holes
ಸೋಮವಾರ, ಸೆಪ್ಟೆಂಬರ್ 12, 2011
ISRO gears up for launch of Megha-Tropiques weather satellite -
ಅಡಿಗ ಕಾವ್ಯ ಕಮ್ಮಟ (4-09-2011 ಭಾನುವಾರ) ಗಾಯನ ತರಬೇತಿ
srikanthsiddapura: ಅಡಿಗ ಕಾವ್ಯ ಕಮ್ಮಟ (4-09-2011 ಭಾನುವಾರ) ಗಾಯನ ತರಬೇತಿ: ಎಂ.ಗೋಪಾಲಕೃಷ್ಣ ಅಡಿಗ ಕಾವ್ಯಕಮ್ಮಟ ಮಂಗಳೂರು ವಿ.ವಿ.ಮಟ್ಟದ ಕಾರ್ಯಾಗಾರ
ಶುಕ್ರವಾರ, ಸೆಪ್ಟೆಂಬರ್ 9, 2011
ಶನಿವಾರ, ಸೆಪ್ಟೆಂಬರ್ 3, 2011
ಗುರುವಾರ, ಸೆಪ್ಟೆಂಬರ್ 1, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)