ಭಾನುವಾರ, ಫೆಬ್ರವರಿ 1, 2015

ನೂತನ ಪ್ರಾಂಶುಪಾಲರಾಗಿ ಡಾ. ಬಿ. ಜಗದೀಶ ಶೆಟ್ಟಿ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಬಿ.ಜಗದೀಶ ಶೆಟ್ಟಿಯವರು ಜನವರಿ 31, 2015 ರಂದು ಅಧಿಕಾರ ಸ್ವೀಕರಿಸಿದರು. ಹಿರಿಯ ಶಾಸನಶಾಸ್ತ್ರತಜ್ಞ ದಿ. ಡಾ. ವಸಂತ ಶೆಟ್ಟಿಯವರ ಸಹೋದರ.   ಅಣ್ಣನ ಮಾರ್ಗದರ್ಶನದಲ್ಲಿ ಶಾಸನಶಾಸ್ತ್ರದತ್ತ  ಒಲವನ್ನು ಬೆಳೆಸಿಕೊಂಡ ಡಾ.ಜಗದೀಶ್ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದವರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಯುತರು  ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಹಂಪಿ ವಿ.ವಿ. ಸಂಶೋಧನಾ ಮಾರ್ಗದರ್ಶಕರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ