ಶನಿವಾರ, ಫೆಬ್ರವರಿ 13, 2016

ಡಾ / ಎ . ಪಿ. ಭಟ್ಟರ ’ ಆಕಾಶ ವೀಕ್ಷಣೆ " -ಉದಯ ಗಾಂವ್ಕರ್

ಅನಂತ ಆಕಾಶವನ್ನು, ಅಪಾರ ಕಲ್ಪನೆಯನ್ನು ಮತ್ತು ಎಂದೆಂದೂ ಮುಗಿಯದ ಪ್ರಶ್ನೆಗಳನ್ನು ಬೆನ್ನಟ್ಟಿಕೊಂಡು ಹೊರಟ ಚುಕ್ಕಿ ಚಂದ್ರಮ ಎಂಬೋ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿದವರು ಡಾ. ಎ.ಪಿ. ಭಟ್. ಎಲ್ಲೋ ಲಕ್ಷ ಲಕ್ಷ ಕಿಲೋಮೀಟರುಗಳಾಚೆ ಇರುವ ಸೂರ್ಯನನ್ನೂ, ಲಕ್ಷ ಲಕ್ಷ ನಕ್ಷತ್ರಗಳನ್ನು ತನ್ನ ಸಹಪಾತ್ರಗಳನ್ನಾಗಿಸಿಕೊಂಡು ಡಾ. ಎ.ಪಿ ಭಟ್ ಒಂದು ರಂಗಪ್ರದರ್ಶನದ ಅನುಭವವನ್ನು ಒದಗಿಸಿದರು. ಬರಡು ಭಾಷಣವಾಗಬಹುದಾದ ಖಗೋಳದ ಪಾಠವನ್ನು ಥಿಯೇಟರಿನ ದೇಹಭಾಷೆಯಲ್ಲಿ ನಮ್ಮನ್ನೆಲ್ಲ ತಲುಪಿದ ಪರಿ ಅನನ್ಯವಾದದ್ದು. ಚುಕ್ಕಿ ಚಂದ್ರಮಕ್ಕೆ ಸ್ಪೂರ್ತಿಯಾದ ಉಪನಿರ್ದೇಶಕರಿಗೂ, ಕ್ಷೇತ್ರಶಿಕ್ಷಣಾಧಿಕಾರಿಗಳಿಗೂ, ಸಹಕರಿಸಿದ ಶ್ರಿ ವೆಂಕಟರಮಣ ಸಂಸ್ಥೆಯ ಶ್ರಿ ರಾಧಾಕೃಷ್ಣ ಶೆಣೈರಿಗೂ, ಖುಷಿಯಿಂದ ಆಗಮಿಸಿದ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೂ ಕೃತಜ್ಙತೆಗಳು.ವೆಂಕಟರಮಣ ಸಂಸ್ಥೆಯ ಶ್ರೀಪತಿ ಹೇರ್ಳೆ, ಶ್ರೀಮತಿ ರೂಪಾ ಶೆಣೈ, ಶ್ರೀಮತಿ ಜಯಶೀಲಾ, ಶ್ರೀ ಗಣೇಶ ನಾಯಕರನ್ನು ಮರೆಯಲಾಗದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ