ಶನಿವಾರ, ಮಾರ್ಚ್ 12, 2016

ಜ್ಞಾನ ಕ್ಷೇತ್ರದ ನಾಯಕತ್ವ ಕೊರತೆ

ಜ್ಞಾನ ಕ್ಷೇತ್ರದ ನಾಯಕತ್ವ ಕೊರತೆ: ಇತ್ತೀಚಿನ ವರ್ಷಗಳಲ್ಲಿ ಜ್ಞಾನಾಧಾರಿತ ಆರ್ಥಿಕತೆ ಎಂಬ ಪರಿಕಲ್ಪನೆಯ ಕುರಿತಂತೆ ನಾವೆಷ್ಟು ಚರ್ಚಿಸಿದ್ದೇವೆ ಎಂದರೆ ಇಲ್ಲಿ ‘ಜ್ಞಾನ’ ಕಳೆದು ಹೋಗಿ ಆರ್ಥಿಕತೆಯೇ ಮುಖ್ಯವಾಗಿಬಿಟ್ಟಿದೆ. ಇದು ಸಿನಿಕತನದ ಮಾತು ಅನ್ನಿಸಬಹುದು. ಆದರೆ ಇದು ವಾಸ್ತವ. ಜ್ಞಾನಾಧಾರಿತ ಉದ್ದಿಮೆಗಳಿಗೆ ಬಹಳ ಒಳ್ಳೆಯ ನಾಯಕತ್ವ ದೊರೆತಿದೆ. ಅದಕ್ಕೆ ಎಷ್ಟು ಉದಾಹರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಈ ಉದ್ದಿಮೆಗಳಿಗೆ ಬಹಳ ಅಗತ್ಯವಿರುವ ಜ್ಞಾನ ಎಂಬ ಮೂಲ ಸೌಕರ್ಯವನ್ನು ನಿರ್ಮಿಸುವುದಕ್ಕೆ ಅಗತ್ಯವಿರುವ ನಾಯಕತ್ವ ನಮ್ಮಲ್ಲಿದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ದೊರೆಯುವ ಉತ್ತರ ಬರೇ ನಿಟ್ಟುಸಿರು ಮಾತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ